ಪರೀಕ್ಷಾ ಕೇಂದ್ರದ ಗೊಂದಲವೇ SSLC ವಿದ್ಯಾರ್ಥಿನಿ ಹೃದಯಾಘಾತಕ್ಕೆ ಕಾರಣ
ಪರೀಕ್ಷಾ ಕೇಂದ್ರದ ಗೊಂದಲವೇ SSLC ವಿದ್ಯಾರ್ಥಿನಿ ಹೃದಯಾಘಾತಕ್ಕೆ ಕಾರಣ

ಮೈಸೂರು: ಪರೀಕ್ಷಾ ಕೇಂದ್ರ ಅದಲು, ಬದಲು ಗೊಂದಲದಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಅನುಶ್ರೀ ಮೃತ ವಿದ್ಯಾರ್ಥಿನಿ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಮಾದಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಅನುಶ್ರೀ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಟಿ. ನರಸೀಪುರದ ವಿದ್ಯೋದಯ ಪಿಯು ಕಾಲೇಜಿಗೆ ತೆರಳಬೇಕಿತ್ತು. ಆದರೆ, ಗೊಂದಲದಿಂದ ಅನುಶ್ರೀ ಟಿ. ನರಸೀಪುರದ ಶಿವಾನಂದ ಶರ್ಮ ಇಂಗ್ಲಿಷ್ ಮಾಧ್ಯಮ ಶಾಲೆಯ ಕೇಂದ್ರಕ್ಕೆ ಹೋಗಿದ್ದಳು.
ಈ ವೇಳೆ ಈ ಕೇಂದ್ರದಲ್ಲಿ ಅನುಶ್ರೀ ಎಂಬ ಮತ್ತೊರ್ವ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕುಳಿತಿದ್ದಳು. ಆಗ ವಿಚಾರಣೆ ನಡೆಸಿದಾಗ ಮೇಲ್ವಿಚಾರಕರು ವಿದ್ಯೋದಯ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸೂಚಿಸಿದ್ದರು. ಈ ಗೊಂದಲದಲ್ಲಿ 20 ನಿಮಿಷ ತಡವಾಗಿ ಪರೀಕ್ಷೆ ಬರೆಯಲು ಆರಂಭಿಸಿದ್ದ ಅನುಶ್ರೀಗೆ ಒತ್ತಡದಿಂದ ಹೃದಯಾಘಾತವಾಗಿದೆ.
Comments
Post a Comment